ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕರಾದ ಟಿವಿಎಸ್ ಮೋಟಾರ್ ಕಂಪನಿ, ಇಂದು 'ಟಿವಿಎಸ್ ಆರ್ಬಿಟರ್' (TVS Orbiter) ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಹೆಚ್ಚು ಸ್ಪರ್ಧಾತ್ಮಕ ರೂ. 99,900 (ಎಕ್ಸ್-ಶೋರೂಂ) ಬೆಲೆಯಲ್ಲಿ ಇದು ಖರೀದಿಗೆ ಲಭ್ಯವಿದ್ದು, ಟಿವಿಎಸ್‌ನಿಂದ ಲಭ್ಯವಿರುವ ಅತ್ಯಂತ ಕೈಗೆಟುಕುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಟಿವಿಎಸ್ ಆರ್ಬಿಟರ್ ಇವಿಯನ್ನು ಒಮ್ಮೆ ಚಾರ್ಜ್ ಮಾಡಿದರೆ 158 ಕಿ.ಮೀ ಓಡಬಲ್ಲದು. ಕ್ರೂಸ್ ಕಂಟ್ರೋಲ್, 34-ಲೀಟರ್ ಅಂಡರ್ ಸೀಟ್ ಸ್ಟೋರೇಜ್, ಹಿಲ್ ಹೋಲ್ಡ್ ಅಸಿಸ್ಟ್ ಮತ್ತು ಸುಧಾರಿತ ಸಂಪರ್ಕಿತ ವೈಶಿಷ್ಟ್ಯಗಳನ್ನು ಹೊಂದಿದೆ. <br /> <br />#tvs #tvsev #tvsorbiter #orbiterwalkaround #drivespark #drivesparkkannada<br /><br />~PR.158~ED.158~CA.25~